Sunday, June 26, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 117 ಮಂದಿ ಗುಣಮುಖ: 62 ಜನರಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 62 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 59 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 117 ಮಂದಿ ಗುಣಮುಖರಾದರು. ಈ ಮಧ್ಯೆ ಕೇರಳದಲ್ಲಿ 4581 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 3920 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 6684 ಜನರಿಗೆ ರೋಗಮುಕ್ತಿಯಾಗಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 574, ಮಲಪ್ಪುರಂ 558, ಆಲಪ್ಪುಳ 496, ಎರ್ನಾಕುಳಂ 489, ತೃಶೂರು 426, ಪಾಲಕ್ಕಾಡು 416, ಕೊಲ್ಲಂ 341, ಕೋಟ್ಟಾಯಂ 266, ಕಣ್ಣೂರು 203, ಪತ್ತನಂತ್ತಿಟ್ಟ 171, ಇಡುಕ್ಕಿ 165, ವಯನಾಡು 101, ಕಾಸರಗೋಡು ಜಿಲ್ಲೆಯಲ್ಲಿ 62 ಜನರಿಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಇದೇ ವೇಳೆ ಕೊರೋನಾ ಬಾಧಿಸಿ ಭಾನುವಾರ ಕೇರಳದಲ್ಲಿ 21 ಮಂದಿ ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss