Wednesday, June 29, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 88 ಮಂದಿ ಗುಣಮುಖ: 81 ಜನರಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಭಾನುವಾರ 81 ಮಂದಿಗೆ ಕೊರೋನಾ ಸೋಂಕು ತಗಲಿದೆ. ಈ ಪೈಕಿ 76 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 88 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5254 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 4445 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ಕಂಡುಬಂದಿದೆ. ರಾಜ್ಯದಲ್ಲಿ 6227 ಜನರು ಗುಣಮುಖರಾದರು.
ಮಲಪ್ಪುರಂ ಜಿಲ್ಲೆಯಲ್ಲಿ 796, ಕಲ್ಲಿಕೋಟೆ 612, ತೃಶೂರು 543, ಎರ್ನಾಕುಳಂ 494, ಪಾಲಕ್ಕಾಡು 468, ಆಲಪ್ಪುಳ 433, ತಿರುವನಂತಪುರ 383, ಕೋಟ್ಟಾಯಂ 355, ಕೊಲ್ಲಂ 314, ಕಣ್ಣೂರು 233, ಇಡುಕ್ಕಿ 220, ಪತ್ತನಂತ್ತಿಟ್ಟ 169, ವಯನಾಡು 153, ಕಾಸರಗೋಡು ಜಿಲ್ಲೆಯಲ್ಲಿ 81 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಭಾನುವಾರ ಕೇರಳದಲ್ಲಿ 27 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss