Saturday, July 2, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 107 ಮಂದಿ ಗುಣಮುಖ: 75 ಜನರಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಭಾನುವಾರ 75 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 72 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 107 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 4777 ಜನರಿಗೆ ಕೊರೋನಾ ವೈರಸ್ ತಗಲಿದೆ. ಇದರಲ್ಲಿ 4120 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 5217 ಜನರು ಗುಣಮುಖರಾದರು.
ಮಲಪ್ಪುರಂ ಜಿಲ್ಲೆಯಲ್ಲಿ 664, ಕಲ್ಲಿಕೋಟೆ 561, ತೃಶೂರು 476, ಎರ್ನಾಕುಳಂ 474, ಕೊಟ್ಟಾಯಂ 387, ಕೊಲ್ಲಂ 380, ತಿರುವನಂತಪುರ 345, ಪಾಲಕ್ಕಾಡು 341, ಆಲಪ್ಪುಳ 272, ಕಣ್ಣೂರು 223, ವಯನಾಡು 213, ಪತ್ತನಂತ್ತಿಟ್ಟ 197, ಇಡುಕ್ಕಿ 169, ಕಾಸರಗೋಡು ಜಿಲ್ಲೆಯಲ್ಲಿ 75 ಜನರಿಗೆ ಕೊರೋನಾ ದೃಢಗೊಂಡಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಕಾಸರಗೋಡು ಜಿಲ್ಲೆಯ ಇಬ್ಬರು ಸೇರಿದಂತೆ ಕೇರಳದಲ್ಲಿ ಭಾನುವಾರ 28 ಮಂದಿ ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss