Thursday, August 18, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 113 ಮಂದಿಗೆ ಕೋವಿಡ್ ಪಾಸಿಟಿವ್: 30 ಜನರಿಗೆ ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 113 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ
110 ಜನರಿಗೆ ಸಂಪರ್ಕ ಮೂಲಕ ಕೋವಿಡ್ ಬಾಧಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ 30 ಮಂದಿ
ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಇದೇ ವೇಳೆ ಕೇರಳದಲ್ಲಿ 1169 ಜನರಿಗೆ ಹೊಸದಾಗಿ ಕೊರೋನಾ ವೈರಸ್ ತಗಲಿದೆ. ಇದರಲ್ಲಿ 991 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ ಒಟ್ಟು 688 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಬಾಧಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು , ರಾಜ್ಯದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 82ಕ್ಕೇರಿತು.
ತಿರುವನಂತಪುರ ಜಿಲ್ಲೆಯಲ್ಲಿ ಬರೋಬ್ಬರಿ 377 ಜನರಿಗೆ ಕೊರೋನಾ ತಗಲಿದೆ. ಎರ್ನಾಕುಳಂ 128, ಮಲಪ್ಪುರಂ 126, ಕಾಸರಗೋಡು 113, ಕೋಟ್ಟಾಯಂ 70, ಕೊಲ್ಲಂ 69, ತೃಶೂರು 58, ಕಲ್ಲಿಕೋಟೆ 50, ಇಡುಕ್ಕಿ 42, ಆಲಪ್ಪುಳ 38, ಪಾಲಕ್ಕಾಡು 38, ಪತ್ತನಂತ್ತಿಟ್ಟ 25, ವಯನಾಡು 19 ಹಾಗೂ ಕಣ್ಣೂರು ಜಿಲ್ಲೆಯಲ್ಲಿ 16 ಮಂದಿಗೆ ಭಾನುವಾರ ಹೊಸದಾಗಿ ಕೊರೋನಾ ಸೋಂಕು ದೃಢಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!