Monday, July 4, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 203 ಮಂದಿಗೆ ಗುಣಮುಖ: 48 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಅಚ್ಚರಿಯ ಬೆಳವಣಿಗೆ ಎಂಬಂತೆ ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 203 ಮಂದಿಗೆ ಕೊರೋನಾ ನೆಗೆಟಿವ್ ಆಗಿದ್ದು , ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ವೈರಸ್ ನ ಶಕ್ತಿ ಕುಂದುವತ್ತ ಸಾಗುತ್ತಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.
ಈ ಮಧ್ಯೆ ಹೊಸದಾಗಿ 48 ಜನರಿಗೆ ಕೋವಿಡ್ ಬಾಧಿಸಿದೆ. ಅಲ್ಲದೆ 37 ಮಂದಿಗೆ ಸಂಪರ್ಕದಿಂದ ರೋಗ ತಗಲಿದೆ. ಇದೇ ವೇಳೆ ಕೇರಳದಲ್ಲಿ ಭಾನುವಾರ ಹೊಸದಾಗಿ 1530 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಈ ಪೈಕಿ 1351 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ 1099 ಜನರು ರೋಗಮುಕ್ತರಾದರು. ಇನ್ನೊಂದೆಡೆ ರಾಜ್ಯದಲ್ಲಿ ಭಾನುವಾರ 10 ಮಂದಿ ಕೊರೋನಾ ತಗಲಿ ಮೃತಪಟ್ಟರು.
ತಿರುವನಂತಪುರ ಜಿಲ್ಲೆಯಲ್ಲಿ 319, ಮಲಪ್ಪುರಂ 221, ಎರ್ನಾಕುಳಂ 123, ಕಲ್ಲಿಕೋಟೆ 118, ಕೋಟ್ಟಾಯಂ 100, ಆಲಪ್ಪುಳ 86, ಕೊಲ್ಲಂ 81, ಕಣ್ಣೂರು 52, ವಯನಾಡು 49, ಕಾಸರಗೋಡು 48, ಪತ್ತನಂತ್ತಿಟ್ಟ 44, ಇಡುಕ್ಕಿ 30, ತೃಶೂರು 30 ಮತ್ತು ಪಾಲಕ್ಕಾಡು ಜಿಲ್ಲೆಯಲ್ಲಿ 29 ಮಂದಿಗೆ ಭಾನುವಾರ ಕೋವಿಡ್ ದೃಢೀಕರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss