ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 85 ಮಂದಿಗೆ ಕೊರೋನಾ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 83 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 44 ಜನರು ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಭಾನುವಾರ 1908 ಮಂದಿಗೆ ಕೋವಿಡ್ ತಗಲಿದೆ. ಇದರಲ್ಲಿ 1718 ಜನರು ಸಂಪರ್ಕ ಮೂಲಕ ಸೋಂಕಿಗೆ ತುತ್ತಾದರು. ರಾಜ್ಯದಲ್ಲಿ 1110 ಮಂದಿ ರೋಗಮುಕ್ತರಾದರು. ಈ ಮಧ್ಯೆ ಕೇರಳದಲ್ಲಿ ಹೊಸದಾಗಿ 5 ಮಂದಿ ಕೋವಿಡ್ ಬಾಧಿಸಿ ಸಾವಿಗೀಡಾದರು. ತಿರುವನಂತಪುರ ಜಿಲ್ಲೆಯಲ್ಲಿ 397, ಆಲಪ್ಪುಳ 241, ಎರ್ನಾಕುಳಂ 200, ಮಲಪ್ಪುರಂ 186, ಕಣ್ಣೂರು 143, ಕೊಲ್ಲಂ 133, ಕಲ್ಲಿಕೋಟೆ 119, ತೃಶೂರು 116, ಕೋಟ್ಟಾಯಂ 106, ಪತ್ತನಂತಿಟ್ಟ 104, ಕಾಸರಗೋಡು ಜಿಲ್ಲೆಯಲ್ಲಿ 85, ಪಾಲಕ್ಕಾಡು 39, ಇಡುಕ್ಕಿ 29 ಹಾಗೂ ವಯನಾಡು ಜಿಲ್ಲೆಯಲ್ಲಿ 10 ಮಂದಿಗೆ ಭಾನುವಾರ ಕೊರೋನಾ ವೈರಸ್ ಸೋಂಕು ಬಾಧಿಸಿದೆ.