Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 159 ಮಂದಿಗೆ ಕೋವಿಡ್ ಸೋಂಕು: 111 ಜನರಿಗೆ ರೋಗಮುಕ್ತಿ

ಕಾಸರಗೋಡು:   ಜಿಲ್ಲೆಯಲ್ಲಿ ಭಾನುವಾರ 159 ಮಂದಿಗೆ ಕೊರೋನಾ ವೈರಸ್ ಸೋಂಕು ಬಾಧಿಸಿದೆ. ಈ ಪೈಕಿ 139 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 111 ಜನರಿಗೆ ರೋಗಮುಕ್ತಿಯಾಗಿದೆ. ಇದೇ ವೇಳೆ ಕೇರಳದಲ್ಲಿ 2154 ಮಂದಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ಇದರಲ್ಲಿ 1962 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. 1766 ಜನರು ಗುಣಮುಖರಾದರು. ಇನ್ನೊಂದೆಡೆ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಭಾನುವಾರ 7 ಸಾವು ಸಂಭವಿಸಿದೆ.
ತಿರುವನಂತಪುರ ಜಿಲ್ಲೆಯಲ್ಲಿ 310, ಕಲ್ಲಿಕೋಟೆ 304, ಎರ್ನಾಕುಳಂ 231, ಕೋಟ್ಟಾಯಂ 223, ಮಲಪ್ಪುರಂ 195, ಕಾಸರಗೋಡು ಜಿಲ್ಲೆಯಲ್ಲಿ 159, ಕೊಲ್ಲಂ 151, ತೃಶೂರು 151, ಪತ್ತನಂತ್ತಿಟ್ಟ 133, ಕಣ್ಣೂರು 112, ಆಲಪ್ಪುಳ 92, ಪಾಲಕ್ಕಾಡು 45, ಇಡುಕ್ಕಿ 35 ಹಾಗೂ ವಯನಾಡು ಜಿಲ್ಲೆಯಲ್ಲಿ 13 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!