Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 453 ಮಂದಿಗೆ ಕೊರೋನಾ ಸೋಂಕು: 120 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 453 ಮಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಇದರಲ್ಲಿ 424 ಮಂದಿಗೆ ಸಂಪರ್ಕದಿಂದ ರೋಗ ತಗಲಿದೆ. 120 ಜನರಿಗೆ ರೋಗಮುಕ್ತಿಯಾಗಿದೆ. ಇದೇ ವೇಳೆ ಕೇರಳದಲ್ಲಿ 7354 ಮಂದಿಗೆ ಕೋವಿಡ್ ಬಾಧಿಸಿದೆ. ಈ ಪೈಕಿ 6364 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ 3420 ಮಂದಿ ಗುಣಮುಖರಾದರು.
ಮಲಪ್ಪುರಂ ಜಿಲ್ಲೆಯಲ್ಲಿ 1040, ತಿರುವನಂತಪುರ 935, ಎರ್ನಾಕುಳಂ 859, ಕಲ್ಲಿಕೋಟೆ 837, ಕೊಲ್ಲಂ 583, ಆಲಪ್ಪುಳ 524, ತೃಶೂರು 484, ಕಾಸರಗೋಡು ಜಿಲ್ಲೆಯಲ್ಲಿ 453, ಕಣ್ಣೂರು 432, ಪಾಲಕ್ಕಾಡು 374, ಕೋಟ್ಟಾಯಂ 336, ಪತ್ತನಂತ್ತಿಟ್ಟ 271, ವಯನಾಡು 169, ಇಡುಕ್ಕಿ ಜಿಲ್ಲೆಯಲ್ಲಿ 57 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮಂಗಳವಾರ 22 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss