Sunday, June 26, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 422 ಮಂದಿಗೆ ಗುಣಮುಖ, 323 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 323 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ 308 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 422 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 8764 ಜನರಿಗೆ ಕೋವಿಡ್ ಸೋಂಕು ತಗಲಿದೆ. ಇದರಲ್ಲಿ 8037 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರಾಜ್ಯದಲ್ಲಿ 7723 ಜನರಿಗೆ ರೋಗಮುಕ್ತಿಯಾಗಿದೆ.
ಮಲಪ್ಪುರಂ 1139, ಎರ್ನಾಕುಳಂ 1122, ಕಲ್ಲಿಕೋಟೆ 1113, ತೃಶೂರು 1010, ಕೊಲ್ಲಂ 907, ತಿರುವನಂತಪುರ 777, ಪಾಲಕ್ಕಾಡು 606, ಆಲಪ್ಪುಳ 488, ಕೋಟ್ಟಾಯಂ 476, ಕಣ್ಣೂರು 370, ಕಾಸರಗೋಡು ಜಿಲ್ಲೆಯಲ್ಲಿ 323, ಪತ್ತನಂತ್ತಿಟ್ಟ 244, ವಯನಾಡು 110, ಇಡುಕ್ಕಿ ಜಿಲ್ಲೆಯಲ್ಲಿ 79 ಜನರಿಗೆ ಕೋವಿಡ್ ವೈರಸ್ ಸೋಂಕು ತಗಲಿದೆ. ಈ ಮಧ್ಯೆ ಕೇರಳದಲ್ಲಿ ಕೊರೋನಾ ಬಾಧಿಸಿ ಮಂಗಳವಾರ 21 ಮಂದಿ ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss