Friday, January 22, 2021

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 199 ಮಂದಿ ಗುಣಮುಖ: 81 ಜನರಿಗೆ ಕೋವಿಡ್ ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 81 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 72 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 199 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6010 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 5188 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 6698 ಜನರಿಗೆ ರೋಗಮುಕ್ತಿಯಾಗಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 807, ತೃಶೂರು 711, ಮಲಪ್ಪುರಂ 685, ಆಲಪ್ಪುಳ 641, ಎರ್ನಾಕುಳಂ 583, ತಿರುವನಂತಪುರ 567, ಕೊಲ್ಲಂ 431, ಕೋಟ್ಟಾಯಂ 426, ಪಾಲಕ್ಕಾಡು 342, ಕಣ್ಣೂರು 301, ಪತ್ತನಂತ್ತಿಟ್ಟ 234, ವಯನಾಡು 112, ಇಡುಕ್ಕಿ 89, ಕಾಸರಗೋಡು ಜಿಲ್ಲೆಯಲ್ಲಿ 81 ಜನರಿಗೆ ಕೋವಿಡ್ ಸೋಂಕು ಬಾಧಿಸಿದೆ. ಈ ಮಧ್ಯೆ ಕೊರೋನಾ ವೈರಸ್ ತಗಲಿ ಕೇರಳದಲ್ಲಿ ಮಂಗಳವಾರ 28 ಮಂದಿ ಅಸುನೀಗಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!