Monday, July 4, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 59 ಮಂದಿಗೆ ಕೊರೋನಾ ಸೋಂಕು: 37 ಜನರಿಗೆ ಗುಣಮುಖ

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಮಂಗಳವಾರ 59 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 50 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 37 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5887 ಜನರಿಗೆ ಕೊರೋನಾ ವೈರಸ್ ತಗಲಿದೆ. ಇದರಲ್ಲಿ 5180 ಮಂದಿಗೆ ಸಂಪರ್ಕದ ಮೂಲಕ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 5029 ಜನರು ಗುಣಮುಖರಾದರು.
ಕೋಟ್ಟಾಯಂ ಜಿಲ್ಲೆಯಲ್ಲಿ 777, ಎರ್ನಾಕುಳಂ 734, ತೃಶೂರು 649, ಮಲಪ್ಪುರಂ 610, ಪತ್ತನಂತ್ತಿಟ್ಟ 561, ಕಲ್ಲಿಕೋಟೆ 507, ಕೊಲ್ಲಂ 437, ತಿರುವನಂತಪುರ 414, ಆಲಪ್ಪುಳ 352, ಪಾಲಕ್ಕಾಡು 249, ಕಣ್ಣೂರು 230, ವಯನಾಡು 208, ಇಡುಕ್ಕಿ 100, ಕಾಸರಗೋಡು ಜಿಲ್ಲೆಯಲ್ಲಿ 59 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಈ ಮಧ್ಯೆ ಕೊರೋನಾ ಬಾಧಿಸಿ ಕೇರಳದಲ್ಲಿ ಮಂಗಳವಾರ 24 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss