Monday, July 4, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 112 ಜನರಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು

ಜಿಲ್ಲೆಯಲ್ಲಿ ಮಂಗಳವಾರ 112 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 100 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 169 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5214 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ 4788 ಮಂದಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ರಾಜ್ಯದಲ್ಲಿ 6475 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 615, ಕೊಲ್ಲಂ 586, ಕೋಟ್ಟಾಯಂ 555, ತೃಶೂರು 498, ಪತ್ತನಂತ್ತಿಟ್ಟ 496, ಕಲ್ಲಿಕೋಟೆ 477, ತಿರುವನಂತಪುರ 455, ಮಲಪ್ಪುರಂ 449, ಆಲಪ್ಪುಳ 338, ಕಣ್ಣೂರು 273, ಪಾಲಕ್ಕಾಡು 186, ಕಾಸರಗೋಡು ಜಿಲ್ಲೆಯಲ್ಲಿ 112, ಇಡುಕ್ಕಿ 100, ವಯನಾಡು ಜಿಲ್ಲೆಯಲ್ಲಿ 74 ಜನರಿಗೆ ಕೋವಿಡ್ ದೃಢಗೊಂಡಿದೆ. ಈ ಮಧ್ಯೆ ಕೊರೋನಾ ತಗಲಿ ಕೇರಳದಲ್ಲಿ ಮಂಗಳವಾರ 19 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss