Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 91 ಮಂದಿಗೆ ಕೊರೋನಾ ವೈರಸ್ ಸೋಂಕು: 25 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 91 ಜನರಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 85 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ 25 ಜನರು ರೋಗಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಇದೇ ವೇಳೆ ಕೇರಳದಲ್ಲಿ ಹೊಸದಾಗಿ 1083 ಮಂದಿಗೆ ಕೊರೋನಾ ವೈರಸ್ ತಗಲಿದೆ. ಇದರಲ್ಲಿ 902 ಜನರಿಗೆ ಸಂಪರ್ಕದಿಂದ ಕೋವಿಡ್ ದೃಢಪಟ್ಟಿದೆ. ಈ ಮಧ್ಯೆ 1021 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಮಂಗಳವಾರ ತಿರುವನಂತಪುರ, ಕಲ್ಲಿಕೋಟೆ, ಎರ್ನಾಕುಳಂ ಜಿಲ್ಲೆಗಳಲ್ಲಿ ತಲಾ ಓರ್ವನಂತೆ ಒಟ್ಟು ಮೂರು ಜನರು ಕೋವಿಡ್ ಬಾಧಿಸಿ ಸಾವಿಗೀಡಾಗಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ 242, ಎರ್ನಾಕುಳಂ 135, ಮಲಪ್ಪುರಂ 131, ಆಲಪ್ಪುಳ 126, ಕಲ್ಲಿಕೋಟೆ 97, ಕಾಸರಗೋಡು 91, ತೃಶೂರು 72, ಪಾಲಕ್ಕಾಡು 50, ಕಣ್ಣೂರು 37, ಪತ್ತನಂತ್ತಿಟ್ಟ 32, ಕೊಲ್ಲಂ 30, ಕೋಟಾಯಂ 23 ಹಾಗೂ ವಯನಾಡು ಜಿಲ್ಲೆಯಲ್ಲಿ ಹೊಸದಾಗಿ 17 ಮಂದಿಯಲ್ಲಿ ಮಹಾಮಾರಿ ಕೊರೋನಾ ಸೋಂಕು ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!