Wednesday, June 29, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 166 ಮಂದಿಗೆ ಕೊರೋನಾ ದೃಢ, 92 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 166 ಜನರಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಪೈಕಿ 159 ಮಂದಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 92 ಮಂದಿ ರೋಗಮುಕ್ತರಾದರು. ಇದೇ ವೇಳೆ ಕೇರಳದಲ್ಲಿ 3026 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 2723 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 1862 ಮಂದಿ ಗುಣಮುಖರಾದರು.
ತಿರುವನಂತಪುರ ಜಿಲ್ಲೆಯಲ್ಲಿ 562, ಮಲಪ್ಪುರಂ 358, ಎರ್ನಾಕುಳಂ 318, ಕಲ್ಲಿಕೋಟೆ 246, ಪಾಲಕ್ಕಾಡು 226, ಆಲಪ್ಪುಳ 217, ಕೊಲ್ಲಂ 209, ಕೋಟ್ಟಾಯಂ 168, ಕಾಸರಗೋಡು ಜಿಲ್ಲೆಯಲ್ಲಿ 166, ಪತ್ತನಂತ್ತಿಟ್ಟ 160, ಕಣ್ಣೂರು 158, ತೃಶೂರು 129, ಇಡುಕ್ಕಿ 85, ವಯನಾಡು 24 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ರಾಜ್ಯದಲ್ಲಿ ಮಂಗಳವಾರ 13 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss