Wednesday, July 6, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ವ್ಯಾಕ್ಸಿನ್ ವಿತರಣೆ ಯಶಸ್ವಿ

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯ ಒಂಭತ್ತು ಕೇಂದ್ರಗಳಲ್ಲಾಗಿ ಕೋವಿಡ್ ವ್ಯಾಕ್ಸಿನೇಶನ್ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮದಲ್ಲಿ ನೀಲೇಶ್ವರ ತಾಲೂಕು ಆಸ್ಪತ್ರೆಯ ಶಿಶುರೋಗ ತಜ್ಞ ಡಾ.ವಿ.ಸುರೇಶನ್ ಮೊದಲ
ಡೋಸ್ ಸ್ವೀಕರಿಸಿದರು.
ನಂತರ ಜಿಲ್ಲಾ ಮೆಡಿಕಲ್ ಆಫೀಸರ್ (ಆರೋಗ್ಯ) ಡಾ.ಎ.ವಿ.ರಾಮದಾಸ್, ಡೆಪ್ಯೂಟಿ ಜಿಲ್ಲಾ ಮೆಡಿಕಲ್ ಆಫೀಸರ್ ಡಾ.ಎ.ಟಿ.ಮನೋಜ್, ಕಾಞಂಗಾಡು ತಾಲೂಕು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ.ಪ್ರಕಾಶ್ ಕೆ.ವಿ. ಮೊದಲಾದವರು ವ್ಯಾಕ್ಸಿನೇಶನ್ ಪಡೆದುಕೊಂಡರು.
ವ್ಯಾಕ್ಸಿನೇಶನ್ ಸಣ್ಣ ಪ್ರಮಾಣದ ನೋವು ಇರುವುದೂ, ಸುರಕ್ಷಿತವೂ ಆಗಿದೆ ಎಂದು ಜಿಲ್ಲೆಯಲ್ಲಿ ವ್ಯಾಕ್ಸಿನ್ ಸ್ವೀಕರಿಸಿದ ನಂತರ ಇದುವರೆಗೆ ಇತರ ಯಾವುದೇ ತೊಂದರೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು.
ಉಕ್ಕಿನಡ್ಕದ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಡಾ.ಆದರ್ಶ್, ನೀಲೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಸುಪರಿಂಟೆಂಡೆಂಟ್ ಡಾ.ಜಮಾಲ್ ಅಹಮ್ಮದ್, ಪೂಡಂಕಲ್ಲು ತಾಲೂಕು ಆಸ್ಪತ್ರೆಯಲ್ಲಿ ಸುಪರಿಂಟೆಂಡೆಂಟ್ ಡಾ.ಸಿ.ಸುಕು, ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸೌಮ್ಯ , ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಡಾ.ಅಭಿಷೇಕ್‌ ಚಂದ್ರನ್, ಪೆರಿಯ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ಆಫೀಸರ್ ಡಾ.ರಾಜ್‌ಮೋಹನ್, ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ ದಿಜಿ ಮೊದಲಾದವರು ಪ್ರಥಮ ಡೋಸ್ ಸ್ವೀಕರಿಸಿದರು.
ಇದೇ ವೇಳೆ ಕೇರಳ ರಾಜ್ಯದ 133 ಕೇಂದ್ರಗಳಲ್ಲೂ ಕೊರೋನಾ ಲಸಿಕೆಯನ್ನು ವಿತರಿಸಲಾಯಿತು. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಯದವರಿಗೆ ಮಾತ್ರವೇ ಈ ಲಸಿಕೆಯನ್ನು ನೀಡಲಾಗುವುದು. ಮೊದಲ ಡೋಸ್ ಪಡೆದವರು 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಾಗುತ್ತದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss