Saturday, January 23, 2021

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 162 ಮಂದಿ ಗುಣಮುಖ: 156 ಜನರಿಗೆ ಕೋವಿಡ್ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 156 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 143 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 162 ಮಂದಿ ಗುಣಮುಖರಾದರು. ಈ ಮಧ್ಯೆ ಕೇರಳದಲ್ಲಿ 7983 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 7049 ಮಂದಿಗೆ ಸಂಪರ್ಕದಿಂದ ರೋಗ ತಗಲಿದೆ. ರಾಜ್ಯದಲ್ಲಿ 7330 ಜನರಿಗೆ ರೋಗಮುಕ್ತಿಯಾಗಿದೆ.
ಎರ್ನಾಕುಳಂ ಜಿಲ್ಲೆಯಲ್ಲಿ 1114, ತೃಶೂರು 1112, ಕಲ್ಲಿಕೋಟೆ 834, ತಿರುವನಂತಪುರ 790, ಮಲಪ್ಪುರಂ 769, ಕೊಲ್ಲಂ 741, ಆಲಪ್ಪುಳ 645, ಕೋಟ್ಟಾಯಂ 584, ಪಾಲಕ್ಕಾಡು 496, ಕಣ್ಣೂರು 337, ಪತ್ತನಂತ್ತಿಟ್ಟ 203, ಕಾಸರಗೋಡು ಜಿಲ್ಲೆಯಲ್ಲಿ 156, ವಯನಾಡು 145, ಇಡುಕ್ಕಿ ಜಿಲ್ಲೆಯಲ್ಲಿ 57 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಇದೇ ವೇಳೆ ಕೊರೋನಾ ಬಾಧಿಸಿ ಕೇರಳದಲ್ಲಿ ಶನಿವಾರ 27 ಮಂದಿ ಸಾವಿಗೀಡಾದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!