Friday, July 1, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಕೋವಿಡ್ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 29 ಮಂದಿಗೆ ಹೊಸದಾಗಿ ಕೊರೋನಾ ವೈರಸ್ ಬಾಧಿಸಿದೆ. 9 ಜನರು ರೋಗದಿಂದ ಮುಕ್ತರಾಗಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಒಟ್ಟು 593 ಮಂದಿಗೆ ಶನಿವಾರ ಮಹಾಮಾರಿ ಕೊರೋನಾ ತಗಲಿದೆ. ಇದರಲ್ಲಿ 364 ಜನರಿಗೆ ಸಂಪರ್ಕದಿಂದ ರೋಗ ದೃಢಪಟ್ಟಿದೆ. ಕೇರಳದಲ್ಲಿ ಒಟ್ಟು 204 ಮಂದಿ ಗುಣಮುಖರಾದರು. ತಿರುವನಂತಪುರ ಜಿಲ್ಲೆಯಲ್ಲಿ 173, ಕೊಲ್ಲಂ 53, ಪಾಲಕ್ಕಾಡು 49, ಎರ್ನಾಕುಳಂ 44 ಮತ್ತು ಆಲಪ್ಪುಳದಲ್ಲಿ 42 ಮಂದಿಗೆ ಕೋವಿಡ್ ಬಾಧಿಸಿದ್ದು , ಶನಿವಾರ ಅತ್ಯಧಿಕ ರೋಗ ಅಟ್ಯಾಕ್ ಆದ ಮೊದಲ ಐದು ಜಿಲ್ಲೆಗಳಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss