Thursday, June 30, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 172 ಮಂದಿಗೆ ಗುಣಮುಖ: 112 ಜನರಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶನಿವಾರ 112 ಮಂದಿಗೆ ಕೋವಿಡ್ ಬಾಧಿಸಿದೆ. ಈ ಪೈಕಿ 109 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 172 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5848 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 5137 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ರಾಜ್ಯದಲ್ಲಿ 5820 ಜನರು ಗುಣಮುಖರಾದರು.
ಮಲಪ್ಪುರಂ ಜಿಲ್ಲೆಯಲ್ಲಿ 920, ಕಲ್ಲಿಕೋಟೆ 688, ಎರ್ನಾಕುಳಂ 655, ಕೊಟ್ಟಾಯಂ 567, ತೃಶೂರು 536, ಕೊಲ್ಲಂ 405, ಪಾಲಕ್ಕಾಡು 399, ಆಲಪ್ಪುಳ 365, ತಿರುವನಂತಪುರ 288, ಕಣ್ಣೂರು 280, ವಯನಾಡು 258, ಪತ್ತನಂತ್ತಿಟ್ಟ 208, ಇಡುಕ್ಕಿ 157, ಕಾಸರಗೋಡು ಜಿಲ್ಲೆಯಲ್ಲಿ 112 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಶನಿವಾರ ಕೇರಳದಲ್ಲಿ 32 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss