Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 153 ಮಂದಿಗೆ ಕೊರೋನಾ ಸೋಂಕು: 28 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 153 ಮಂದಿಗೆ ಕೊರೋನಾ ಸೋಂಕು ದೃಢೀಕರಿಸಲಾಗಿದೆ. ಜಿಲ್ಲೆಯಲ್ಲಿ 28 ಮಂದಿ ಗುಣಮುಖರಾಗಿದ್ದಾರೆ.
ಇದೇ ವೇಳೆ ಕೇರಳ ರಾಜ್ಯದಲ್ಲಿ ಹೊಸದಾಗಿ 1129 ಮಂದಿಗೆ ಕೊರೋನಾ ತಗಲಿದೆ. ಇದರಲ್ಲಿ 880 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ. 752 ಮಂದಿ ರೋಗಮುಕ್ತರಾಗಿದ್ದಾರೆ. ಎರ್ನಾಕುಳಂ 2, ಮಲಪ್ಪುರಂ 1, ಕಾಸರಗೋಡು 1, ತಿರುವನಂತಪುರ 1, ಕಲ್ಲಿಕೋಟೆ 1, ಕೊಲ್ಲಂ 1, ತೃಶೂರು ಜಿಲ್ಲೆಯಲ್ಲಿ 1 ಸೇರಿದಂತೆ ಶನಿವಾರ ಕೋವಿಡ್ ಬಾಧಿಸಿ 8 ಮಂದಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 259, ಕಾಸರಗೋಡು 153, ಮಲಪ್ಪುರಂ 141, ಕಲ್ಲಿಕೋಟೆ 95, ಪತ್ತನಂತ್ತಿಟ್ಟ 85, ತೃಶೂರು 76, ಆಲಪ್ಪುಳ 67, ಎರ್ನಾಕುಳಂ 59, ಕೋಟ್ಟಾಯಂ 47, ಪಾಲಕ್ಕಾಡು 47, ವಯನಾಡು 46, ಕೊಲ್ಲಂ 35, ಇಡುಕ್ಕಿ 14 ಮತ್ತು ಕಣ್ಣೂರು ಜಿಲ್ಲೆಯಲ್ಲಿ 5 ಮಂದಿಗೆ ಕೊರೋನಾ ವೈರಸ್ ಸೋಂಕು ತಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!