Monday, July 4, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 81 ಮಂದಿಗೆ ಕೊರೋನಾ ವೈರಸ್ : ಮೂವರು ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 81 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 71 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಕೇವಲ ಮೂರು ಮಂದಿ ಮಾತ್ರ ರೋಗಮುಕ್ತರಾದರು. ಈ ಮಧ್ಯೆ ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಕೇರಳದಲ್ಲಿ ಶನಿವಾರ ಕೊರೋನಾ ತಗಲಿ 7 ಜನರು ಸಾವಿಗೀಡಾದರು. ಕೇರಳದಲ್ಲಿ ಹೊಸದಾಗಿ 1608 ಮಂದಿಗೆ ಕೋವಿಡ್ ಬಾಧಿಸಿದೆ. ಇದರಲ್ಲಿ 1409 ಜನರಿಗೆ ಸಂಪರ್ಕದಿಂದ ರೋಗ ದೃಢಗೊಂಡಿದೆ. ರಾಜ್ಯದಲ್ಲಿ ಒಟ್ಟು 803 ಜನರು ಗುಣಮುಖರಾದರು.
ಮಲಪ್ಪುರಂ ಜಿಲ್ಲೆಯಲ್ಲಿ 362, ತಿರುವನಂತಪುರ 321, ಕಲ್ಲಿಕೋಟೆ 151, ಆಲಪ್ಪುಳ 118, ಎರ್ನಾಕುಳಂ 106, ಕೊಲ್ಲಂ 91, ತೃಶೂರು 85, ಕಾಸರಗೋಡು 81, ಪಾಲಕ್ಕಾಡು 74, ಕಣ್ಣೂರು 52, ಪತ್ತನಂತ್ತಿಟ್ಟ 49, ವಯನಾಡು 48, ಕೋಟ್ಟಾಯಂ 39 ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 31 ಜನರಿಗೆ ಶನಿವಾರ ಕೊರೋನಾ ಸೋಂಕು ಬಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss