ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 119 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 111 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 40 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ಕೇರಳದಲ್ಲಿ 2172 ಜನರಿಗೆ ಶನಿವಾರ ಕೋವಿಡ್ ವೈರಸ್ ದೃಢೀಕರಿಸಲಾಗಿದೆ. ಇದರಲ್ಲಿ 1964 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 1292 ಮಂದಿ ರೋಗಮುಕ್ತರಾದರು. ಇನ್ನೊಂದೆಡೆ ಕೊರೋನಾ ಬಾಧಿಸಿ ಕೇರಳದಲ್ಲಿ ಶನಿವಾರ ಒಟ್ಟು 15 ಮಂದಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 464, ಮಲಪ್ಪುರಂ 395, ಕಲ್ಲಿಕೋಟೆ 232, ಪಾಲಕ್ಕಾಡು 184, ತೃಶೂರು 179, ಕಾಸರಗೋಡು ಜಿಲ್ಲೆಯಲ್ಲಿ 119, ಎರ್ನಾಕುಳಂ 114, ಕೋಟ್ಟಾಯಂ 104, ಪತ್ತನಂತ್ತಿಟ್ಟ 93, ಆಲಪ್ಪುಳ 87, ಕೊಲ್ಲಂ 77, ಕಣ್ಣೂರು 62, ಇಡುಕ್ಕಿ 37 ಹಾಗೂ ವಯನಾಡು ಜಿಲ್ಲೆಯಲ್ಲಿ 25 ಮಂದಿಗೆ ಹೊಸದಾಗಿ ಕೋವಿಡ್ ಬಾಧಿಸಿದೆ.