Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 268 ಮಂದಿಗೆ ಕೊರೋನಾ: 107 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 268 ಮಂದಿಗೆ ಕೊರೋನಾ ಸೋಂಕು ಬಾಧಿಸಿದೆ. ಈ ಪೈಕಿ 251 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 107 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಶುಕ್ರವಾರ 6477 ಜನರಿಗೆ ಕೋವಿಡ್ ದೃಢೀಕರಿಸಲಾಗಿದೆ. ಇದರಲ್ಲಿ 5418 ಮಂದಿಗೆ ಸಂಪರ್ಕದಿಂದ ರೋಗ ದೃಢಗೊಂಡಿದೆ. ರಾಜ್ಯದಲ್ಲಿ 3481 ಜನರಿಗೆ ರೋಗಮುಕ್ತಿಯಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ 814, ಮಲಪ್ಪುರಂ 784, ಕಲ್ಲಿಕೋಟೆ 690, ಎರ್ನಾಕುಳಂ 655, ತೃಶೂರು 607, ಕೊಲ್ಲಂ 569, ಆಲಪ್ಪುಳ 561, ಕಣ್ಣೂರು 419, ಪಾಲಕ್ಕಾಡು 419, ಕೋಟ್ಟಾಯಂ 322, ಕಾಸರಗೋಡು ಜಿಲ್ಲೆಯಲ್ಲಿ 268, ಪತ್ತನಂತ್ತಿಟ್ಟ 191, ಇಡುಕ್ಕಿ 114, ವಯನಾಡು ಜಿಲ್ಲೆಯಲ್ಲಿ 74 ಮಂದಿಗೆ ಕೊರೋನಾ ವೈರಸ್ ಸೋಂಕು ತಗಲಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಶುಕ್ರವಾರ ಕೇರಳದಲ್ಲಿ 22 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss