Tuesday, August 16, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 476 ಮಂದಿಗೆ ಕೊರೋನಾ ಸೋಂಕು: 158 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 476 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 451 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 158 ಮಂದಿಗೆ ರೋಗಮುಕ್ತಿಯಾಗಿದೆ. ಇದೇ ವೇಳೆ ಕೇರಳದಲ್ಲಿ 9258 ಜನರಿಗೆ ಕೋವಿಡ್ ತಗಲಿದೆ. ಇದರಲ್ಲಿ 8274 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 4092 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 1146, ತಿರುವನಂತಪುರ 1090, ಎರ್ನಾಕುಳಂ 1042, ಮಲಪ್ಪುರಂ 1016, ಕೊಲ್ಲಂ 892, ತೃಶೂರು 812, ಪಾಲಕ್ಕಾಡು 633, ಕಣ್ಣೂರು 625, ಆಲಪ್ಪುಳ 605, ಕಾಸರಗೋಡು ಜಿಲ್ಲೆಯಲ್ಲಿ 476, ಕೋಟ್ಟಾಯಂ 432, ಪತ್ತನಂತ್ತಿಟ್ಟ 239, ಇಡುಕ್ಕಿ 136, ವಯನಾಡು ಜಿಲ್ಲೆಯಲ್ಲಿ 108 ಜನರಿಗೆ ಕೊರೋನಾ ದೃಢಪಡಿಸಲಾಗಿದೆ. ಈ ಮಧ್ಯೆ ಕೋವಿಡ್ ತಗಲಿ ಕೇರಳದಲ್ಲಿ ಶುಕ್ರವಾರ 20 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss