Tuesday, July 5, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಕೋವಿಡ್ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 73 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 75 ಜನರು ಗುಣಮುಖರಾದರು. ಈ ಮಧ್ಯೆ ಕೇರಳದಲ್ಲಿ 5456 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 4722 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 4701 ಮಂದಿ ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 674, ತೃಶೂರು 630, ಎರ್ನಾಕುಳಂ 578, ಕೋಟ್ಟಾಯಂ 538, ಮಲಪ್ಪುರಂ 485, ಕೊಲ್ಲಂ 441, ಪತ್ತನಂತ್ತಿಟ್ಟ 404, ಪಾಲಕ್ಕಾಡು 365, ಆಲಪ್ಪುಳ 324, ತಿರುವನಂತಪುರ 309, ಕಣ್ಣೂರು 298, ವಯನಾಡು 219, ಇಡುಕ್ಕಿ 113, ಕಾಸರಗೋಡು ಜಿಲ್ಲೆಯಲ್ಲಿ 78 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದೇ ವೇಳೆ ಕೋವಿಡ್ ಬಾಧಿಸಿ ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಕೇರಳದಲ್ಲಿ ಶುಕ್ರವಾರ 23 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss