Saturday, July 2, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 80 ಮಂದಿಗೆ ಕೊರೋನಾ ಪಾಸಿಟಿವ್

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶುಕ್ರವಾರ 80 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 68 ಜನರಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಅಲ್ಲದೆ ಜಿಲ್ಲೆಯಲ್ಲಿ 28 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 4991 ಜನರಿಗೆ ಕೊರೋನಾ ದೃಢಗೊಂಡಿದೆ. ಇದರಲ್ಲಿ 4413 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 5111 ಮಂದಿ ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 602, ಮಲಪ್ಪುರಂ 511, ಪತ್ತನಂತ್ತಿಟ್ಟ 493, ಕೋಟ್ಟಾಯಂ 477, ಕಲ್ಲಿಕೋಟೆ 452, ತೃಶೂರು 436, ಕೊಲ್ಲಂ 417, ತಿರುವನಂತಪುರ 386, ಆಲಪ್ಪುಳ 364, ಕಣ್ಣೂರು 266, ಪಾಲಕ್ಕಾಡು 226, ವಯನಾಡು 174, ಇಡುಕ್ಕಿ 107, ಕಾಸರಗೋಡು ಜಿಲ್ಲೆಯಲ್ಲಿ 80 ಜನರಿಗೆ ಕೊರೋನಾ ಸೋಂಕು ಬಾಧಿಸಿದೆ. ಈ ಮಧ್ಯೆ ಕೋವಿಡ್ ತಗಲಿ ಕೇರಳದಲ್ಲಿ ಶುಕ್ರವಾರ 23 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss