Monday, August 15, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 112 ಮಂದಿಗೆ ಗುಣಮುಖ: 97 ಜನರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶುಕ್ರವಾರ 97 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದರಲ್ಲಿ 93 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 112 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5624 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಪೈಕಿ 5110 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 4603 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 799, ಕಲ್ಲಿಕೋಟೆ 660, ಕೋಟ್ಟಾಯಂ 567, ತೃಶೂರು 499, ಮಲಪ್ಪುರಂ 478, ಕೊಲ್ಲಂ 468, ಪತ್ತನಂತ್ತಿಟ್ಟ 443, ಆಲಪ್ಪುಳ 353, ತಿರುವನಂತಪುರ 301, ಇಡುಕ್ಕಿ 290, ವಯನಾಡು 241, ಕಣ್ಣೂರು 219, ಪಾಲಕ್ಕಾಡು 209, ಕಾಸರಗೋಡು ಜಿಲ್ಲೆಯಲ್ಲಿ 97 ಜನರಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಕೇರಳದಲ್ಲಿ ಶುಕ್ರವಾರ 23 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss