Tuesday, June 28, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 67 ಮಂದಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 67 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 64 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 61 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6753 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಲ್ಲಿ 6109 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 6108 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 1018, ಕಲ್ಲಿಕೋಟೆ 740, ಪತ್ತನಂತ್ತಿಟ್ಟ 624, ಮಲಪ್ಪುರಂ 582, ಕೋಟ್ಟಾಯಂ 581, ಕೊಲ್ಲಂ 573, ತೃಶೂರು 547, ತಿರುವನಂತಪುರ 515, ಆಲಪ್ಪುಳ 409, ಕಣ್ಣೂರು 312, ಪಾಲಕ್ಕಾಡು 284, ವಯನಾಡು 255, ಇಡುಕ್ಕಿ 246, ಕಾಸರಗೋಡು ಜಿಲ್ಲೆಯಲ್ಲಿ 67 ಜನರಿಗೆ ಕೊರೋನಾ ವೈರಸ್ ತಗಲಿದೆ. ಈ ಮಧ್ಯೆ ಕೋವಿಡ್ ಸೋಂಕು ಬಾಧಿಸಿ ಕೇರಳದಲ್ಲಿ ಶುಕ್ರವಾರ 19 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss