ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 52 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 48 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇದೇ ವೇಳೆ 129 ಮಂದಿ ಗುಣಮುಖರಾಗಿದ್ದು , ಗಮನಾರ್ಹ ವಿಷಯವಾಗಿದೆ.
ಕೇರಳದಲ್ಲಿ ಹೊಸದಾಗಿ 1310 ಮಂದಿಯಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಇದರಲ್ಲಿ 1162 ಜನರಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇಡೀ ರಾಜ್ಯದಲ್ಲಾಗಿ 864 ಮಂದಿ ರೋಗಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ಇನ್ನೊಂದೆಡೆ ಕೇರಳದಲ್ಲಿ ಮಹಾಮಾರಿ ಕೊರೋನಾ ಬಾಧಿಸಿ ಎರ್ನಾಕುಳಂ ಜಿಲ್ಲೆಯಲ್ಲಿ ಇಬ್ಬರು, ಕೊಲ್ಲಂ ಜಿಲ್ಲೆಯಲ್ಲಿ ಒಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 73ಕ್ಕೇರಿತು.
ತಿರುವನಂತಪುರ ಜಿಲ್ಲೆಯಲ್ಲಿ ಬರೋಬ್ಬರಿ 320 ಮಂದಿಗೆ ಸೋಂಕು ತಗಲಿದೆ. ಎರ್ನಾಕುಳಂ 132, ಪತ್ತನಂತ್ತಿಟ್ಟ 130, ವಯನಾಡು 124, ಕೋಟ್ಟಾಯಂ 89, ಕಲ್ಲಿಕೋಟೆ 84, ಪಾಲಕ್ಕಾಡು 83, ಮಲಪ್ಪುರಂ 75, ತೃಶೂರು 60, ಇಡುಕ್ಕಿ 59, ಕೊಲ್ಲಂ 53, ಕಾಸರಗೋಡು 52, ಆಲಪ್ಪುಳ 35 ಹಾಗೂ ಕಣ್ಣೂರು ಜಿಲ್ಲೆಯಲ್ಲಿ 14 ಮಂದಿಗೆ ಹೊಸದಾಗಿ ಕೋವಿಡ್ ದೃಢೀಕರಿಸಲಾಗಿದೆ.