ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 168 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 164 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 123 ಮಂದಿ ರೋಗಮುಕ್ತರಾಗಿದ್ದಾರೆ. ಇದೇ ವೇಳೆ ಕೇರಳದಲ್ಲಿ ಶುಕ್ರವಾರ 1251 ಮಂದಿಗೆ ಕೋವಿಡ್ ತಗಲಿದೆ. ಇದರಲ್ಲಿ 1061 ಜನರಿಗೆ ಸಂಪರ್ಕದಿಂದ ಕೊರೋನಾ ದೃಢಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 814 ಮಂದಿ ಗುಣಮುಖರಾಗಿದ್ದಾರೆ. ಇನ್ನೊಂದೆಡೆ ಮಹಾಮಾರಿ ಕೊರೋನಾ ಬಾಧಿಸಿ ಕೇರಳದಲ್ಲಿ ಹೊಸದಾಗಿ 5 ಜನರು ಮೃತಪಟ್ಟಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ 289, ಕಾಸರಗೋಡು 168, ಕಲ್ಲಿಕೋಟೆ 149, ಮಲಪ್ಪುರಂ 142, ಪಾಲಕ್ಕಾಡು 123 ಮಂದಿ ಎಂಬಂತೆ ಶುಕ್ರವಾರ ಅತೀ ಹೆಚ್ಚು ಕೊರೋನಾ ಸೋಂಕು ಪತ್ತೆಯಾದ ಜಿಲ್ಲೆಗಳಾಗಿವೆ.