ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 49 ಮಂದಿಗೆ ಕೊರೋನಾ ವೈರಸ್ ಸೋಂಕು ಬಾಧಿಸಿದೆ. ಈ ಪೈಕಿ 34 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ 51 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಒಬ್ಬರು ಮಹಿಳೆ ಸೇರಿ ರಾಜ್ಯದಲ್ಲಿ ಶುಕ್ರವಾರ ಒಟ್ಟು 10 ಮಂದಿ ಕೋವಿಡ್ ಬಾಧಿಸಿ ಸಾವಿಗೀಡಾದರು.
ಇದೇ ವೇಳೆ ಕೇರಳದಲ್ಲಿ 1569 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಇದರಲ್ಲಿ 1354 ಮಂದಿಯಲ್ಲಿ ಸಂಪರ್ಕದ ಮೂಲಕ ರೋಗ ಗುರುತಿಸಲಾಗಿದೆ. 1304 ಮಂದಿ ರೋಗಮುಕ್ತರಾದರು.
ತಿರುವನಂತಪುರ ಜಿಲ್ಲೆಯಲ್ಲಿ 310, ಮಲಪ್ಪುರಂ 198, ಪಾಲಕ್ಕಾಡು 180, ಆಲಪ್ಪುಳ 113, ಎರ್ನಾಕುಳಂ 110, ಕೋಟ್ಟಾಯಂ 101, ಕಲ್ಲಿಕೋಟೆ 99, ಕಣ್ಣೂರು 95, ತೃಶೂರು 80, ಕೊಲ್ಲಂ 75, ಇಡುಕ್ಕಿ 58, ವಯನಾಡು 57, ಕಾಸರಗೋಡು 49 ಮತ್ತು ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 40 ಮಂದಿಗೆ ಶುಕ್ರವಾರ ಹೊಸದಾಗಿ ಕೊರೋನಾ ವೈರಸ್ ತಗಲಿದೆ.