Thursday, July 7, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 128 ಮಂದಿ ಗುಣಮುಖ, 102 ಜನರಿಗೆ ಕೊರೋನಾ ದೃಢ

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 102 ಮಂದಿಗೆ ಕೊರೋನಾ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ 128 ಜನರು ರೋಗಮುಕ್ತಿಯಾದರು. ಇದೇ ವೇಳೆ ಕೇರಳದಲ್ಲಿ 2988 ಮಂದಿಗೆ ಕೋವಿಡ್ ತಗಲಿದೆ. ಇದರಲ್ಲಿ 2738 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 1326 ಮಂದಿ ಗುಣಮುಖರಾದರು.
ತಿರುವನಂತಪುರ ಜಿಲ್ಲೆಯಲ್ಲಿ 494, ಮಲಪ್ಪುರಂ 390, ಕೊಲ್ಲಂ 303, ಎರ್ನಾಕುಳಂ 295, ಕಲ್ಲಿಕೋಟೆ 261, ಕಣ್ಣೂರು 256, ಕೋಟ್ಟಾಯಂ 221, ಆಲಪ್ಪುಳ 200, ತೃಶೂರು 184, ಪಾಲಕ್ಕಾಡು 109, ಕಾಸರಗೋಡು ಜಿಲ್ಲೆಯಲ್ಲಿ 102, ಪತ್ತನಂತ್ತಿಟ್ಟ 93, ವಯನಾಡು 52, ಇಡುಕ್ಕಿ 28 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss