ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 110 ಮಂದಿಗೆ ಕೊರೋನಾ ಸೋಂಕು ಬಾಧಿಸಿದೆ. ಈ ಪೈಕಿ 101 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 176 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 2910 ಜನರಿಗೆ ಕೋವಿಡ್ ದೃಢಗೊಳಿಸಲಾಗಿದೆ. ಇದರಲ್ಲಿ 2653 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 3022 ಜನರಿಗೆ ರೋಗಮುಕ್ತಿಯಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ 533, ಕಲ್ಲಿಕೋಟೆ 376, ಮಲಪ್ಪುರಂ 349, ಕಲ್ಲಿಕೋಟೆ 314, ಎರ್ನಾಕುಳಂ 299, ಕೊಲ್ಲಂ 195, ತೃಶೂರು 183, ಪಾಲಕ್ಕಾಡು 167, ಕೋಟ್ಟಾಯಂ 156, ಆಲಪ್ಪುಳ 112, ಕಾಸರಗೋಡು ಜಿಲ್ಲೆಯಲ್ಲಿ 110, ಇಡುಕ್ಕಿ 82, ವಯನಾಡು 18, ಪತ್ತನಂತ್ತಿಟ್ಟ 16 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್ ಬಾಧಿಸಿ ಸೋಮವಾರ 18 ಮಂದಿ ಸಾವಿಗೀಡಾದರು.