Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 122 ಮಂದಿಗೆ ಕೊರೋನಾ ದೃಢ: 91 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 122 ಮಂದಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಈ ಪೈಕಿ 114 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 91 ಮಂದಿಗೆ ರೋಗಮುಕ್ತಿಯಾಗಿದೆ. ಈ ಮಧ್ಯೆ ಕೇರಳದಲ್ಲಿ ಸೋಮವಾರ 4538 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 3997 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 3347 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 918, ಎರ್ನಾಕುಳಂ 537, ತಿರುವನಂತಪುರ 486, ಮಲಪ್ಪುರಂ 405, ತೃಶೂರು 383, ಪಾಲಕ್ಕಾಡು 378, ಕೊಲ್ಲಂ 341, ಕಣ್ಣೂರು 310, ಆಲಪ್ಪುಳ 249, ಕೋಟ್ಟಾಯಂ 213, ಕಾಸರಗೋಡು ಜಿಲ್ಲೆಯಲ್ಲಿ 122, ಇಡುಕ್ಕಿ 114, ವಯನಾಡು 44, ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 38 ಜನರಿಗೆ ಕೊರೋನಾ ದೃಢೀಕರಿಸಲಾಗಿದೆ. ಇದೇ ವೇಳೆ ಕೇರಳದಲ್ಲಿ ಕೋವಿಡ್ ಬಾಧಿಸಿ ಸೋಮವಾರ 20 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss