Friday, July 1, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 143 ಮಂದಿಗೆ ರೋಗಮುಕ್ತಿ: 58 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 58 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 56 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 143 ಮಂದಿಗೆ ರೋಗಮುಕ್ತಿಯಾಗಿದೆ. ಇದೇ ವೇಳೆ ಕೇರಳದಲ್ಲಿ 4138 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 3599 ಮಂದಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ರಾಜ್ಯದಲ್ಲಿ 7108 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 576, ಎರ್ನಾಕುಳಂ 518, ಆಲಪ್ಪುಳ 498, ಮಲಪ್ಪುರಂ 467, ತೃಶೂರು 433, ತಿರುವನಂತಪುರ 361, ಕೊಲ್ಲಂ 350, ಪಾಲಕ್ಕಾಡು 286, ಕೋಟ್ಟಾಯಂ 246, ಕಣ್ಣೂರು 195, ಇಡುಕ್ಕಿ 60, ಕಾಸರಗೋಡು ಜಿಲ್ಲೆಯಲ್ಲಿ 58, ವಯನಾಡು 46, ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 44 ಮಂದಿಯಲ್ಲಿ ಹೊಸದಾಗಿ ಕೋವಿಡ್ ಪತ್ತೆಯಾಗಿದೆ. ಈ ಮಧ್ಯೆ ಕೇರಳದಲ್ಲಿ ಕೊರೋನಾ ಬಾಧಿಸಿ ಸೋಮವಾರ 21 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss