Sunday, June 26, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 97 ಮಂದಿಗೆ ಗುಣಮುಖ: 32 ಜನರಿಗೆ ಕೋವಿಡ್ ಸೋಂಕು

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 32 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 29 ಜನರಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 97 ಜನರು ಗುಣಮುಖರಾದರು. ಈ ಮಧ್ಯೆ ಕೇರಳದಲ್ಲಿ 3757 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 3272 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ರಾಜ್ಯದಲ್ಲಿ 5425 ಮಂದಿ ಗುಣಮುಖರಾದರು.

ಮಲಪ್ಪುರಂ ಜಿಲ್ಲೆಯಲ್ಲಿ 1023, ಕಲ್ಲಿಕೋಟೆ 514, ಪಾಲಕ್ಕಾಡು 331, ಎರ್ನಾಕುಳಂ 325, ಕೋಟ್ಟಾಯಂ 279, ತೃಶೂರು 278, ಆಲಪ್ಪುಳ 259, ತಿರುವನಂತಪುರ 229, ಕೊಲ್ಲಂ 198, ಕಣ್ಣೂರು 144, ಪತ್ತನಂತ್ತಿಟ್ಟ 57, ಇಡುಕ್ಕಿ 49, ವಯನಾಡು 39, ಕಾಸರಗೋಡು ಜಿಲ್ಲೆಯಲ್ಲಿ 32 ಜನರಿಗೆ ಕೊರೋನಾ ವೈರಸ್ ತಗಲಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಕೇರಳದಲ್ಲಿ ಸೋಮವಾರ 22 ಮಂದಿ ಕೊರೋನಾ ಬಾಧಿಸಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss