Tuesday, July 5, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 157 ಮಂದಿಗೆ ಗುಣಮುಖ: 27 ಜನರಿಗೆ ಕೊರೋನಾ ಸೋಂಕು

ಹೊಸದಿಗಂತ ವರದಿ,ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 27 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 26 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 157 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 3021 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 2643 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 5145 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 481, ಮಲಪ್ಪುರಂ 406, ಎರ್ನಾಕುಳಂ 382, ತೃಶೂರು 281, ಕೋಟ್ಟಾಯಂ 263, ಆಲಪ್ಪುಳ 230, ತಿರುವನಂತಪುರ 222, ಕೊಲ್ಲಂ 183, ಪಾಲಕ್ಕಾಡು 135, ಕಣ್ಣೂರು 133, ಪತ್ತನಂತ್ತಿಟ್ಟ 110, ಇಡುಕ್ಕಿ 89, ವಯನಾಡು 79, ಕಾಸರಗೋಡು ಜಿಲ್ಲೆಯಲ್ಲಿ 27 ಜನರಿಗೆ ಕೊರೋನಾ ವೈರಸ್ ಬಾಧಿಸಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಕೇರಳದಲ್ಲಿ ಸೋಮವಾರ 19 ಮಂದಿ ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss