Thursday, August 18, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೋವಿಡ್ ಪಾಸಿಟಿವ್: 53 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೊರೋನಾ ರೋಗ ದೃಢಪಡಿಸಲಾಗಿದೆ. ಅಲ್ಲದೆ 53 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.
ಕೇರಳ ರಾಜ್ಯದಲ್ಲಿ 702 ಮಂದಿಗೆ ಹೊಸದಾಗಿ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 483 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ. ಒಟ್ಟು 745 ಜನರು ರೋಗಮುಕ್ತರಾಗಿದ್ದಾರೆ. ಕಲ್ಲಿಕೋಟೆ ಮತ್ತು ಕೋಟಾಯಂ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಇಬ್ಬರು ಮಹಾಮಾರಿ ಕೊರೋನಾ ತಗಲಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 161, ಮಲಪ್ಪುರಂ 86, ಇಡುಕ್ಕಿ 70, ಕಲ್ಲಿಕೋಟೆ 68, ಕೋಟಾಯಂ 59, ಪಾಲಕ್ಕಾಡು 41, ತೃಶೂರು 40, ಕಣ್ಣೂರು 38, ಕಾಸರಗೋಡು 38, ಆಲಪ್ಪುಳ 30, ಕೊಲ್ಲಂ 22, ಪತ್ತನಂತ್ತಿಟ್ಟ 17, ವಯನಾಡು 17 ಹಾಗೂ ಎರ್ನಾಕುಳಂ ಜಿಲ್ಲೆಯಲ್ಲಿ 15 ಮಂದಿಗೆ ಸೋಮವಾರ ಕೊರೋನಾ ವೈರಸ್ ಸೋಂಕು ಬಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!