Wednesday, August 17, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 146 ಮಂದಿಗೆ ಕೊರೋನಾ ಸೋಂಕು: 15 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 146 ಮಂದಿಗೆ ಕೋವಿಡ್ ಸೋಂಕು ಬಾಧಿಸಿದೆ. ಈ ಪೈಕಿ 122 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. 15 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2790 ಜನರಿಗೆ ಕೊರೋನಾ ಬಾಧಿಸಿದ್ದು , ರೋಗ ತಗಲಿ ಇಲ್ಲಿಯತನಕ ಜಿಲ್ಲೆಯಲ್ಲಿ ಒಟ್ಟು 12 ಸಾವು ಸಂಭವಿಸಿದೆ.
ಕೇರಳದಲ್ಲಿ ಸೋಮವಾರ 1184 ಮಂದಿಯಲ್ಲಿ ಕೊರೋನಾ ಪತ್ತೆಹಚ್ಚಲಾಗಿದೆ. ಇದರಲ್ಲಿ 956 ಜನರಿಗೆ ಸಂಪರ್ಕದಿಂದ ವೈರಸ್ ತಗಲಿದೆ. 784 ಮಂದಿ ರೋಗಮುಕ್ತರಾಗಿದ್ದಾರೆ. ಮಹಾಮಾರಿ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಸೋಮವಾರ 7 ಜನರು ಮೃತಪಟ್ಟಿದ್ದು , ಒಟ್ಟು 115 ಮಂದಿ ಸಾವಿಗೀಡಾಗಿದ್ದಾರೆ. ಕೇರಳದಲ್ಲಿ ಇದುವರೆಗೆ ಒಟ್ಟು 35,515 ಜನರಿಗೆ ಕೋವಿಡ್ ಸೋಂಕು ಬಾಧಿಸಿದೆ.
ಮಲಪ್ಪುರಂ ಜಿಲ್ಲೆಯಲ್ಲಿ 255, ತಿರುವನಂತಪುರ 200, ಪಾಲಕ್ಕಾಡು 147, ಎರ್ನಾಕುಳಂ 101, ಕಲ್ಲಿಕೋಟೆ 66, ಕಣ್ಣೂರು 63, ಕೊಲ್ಲಂ 41, ತೃಶೂರು 40, ಕೋಟ್ಟಾಯಂ 40, ವಯನಾಡು 33, ಆಲಪ್ಪುಳ 30, ಇಡುಕ್ಕಿ 10 ಹಾಗೂ ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 4 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢೀಕರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!