Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 103 ಮಂದಿಗೆ ಕೊರೋನಾ ಪಾಸಿಟಿವ್: 56 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 103 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 97 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ 56 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಸೋಮವಾರ 1530 ಮಂದಿಗೆ ಕೊರೋನಾ ತಗಲಿದೆ. ಈ ಪೈಕಿ 1367 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 1693 ಮಂದಿ ರೋಗಮುಕ್ತರಾದರು. ರಾಜ್ಯದಲ್ಲಿ ಕೋವಿಡ್ ತಗಲಿ ಸೋಮವಾರ 7 ಮಂದಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 221, ಎರ್ನಾಕುಳಂ 210, ಮಲಪ್ಪುರಂ 177, ಆಲಪ್ಪುಳ 137, ಕೊಲ್ಲಂ 131, ಕಲ್ಲಿಕೋಟೆ 117, ಪತ್ತನಂತ್ತಿಟ್ಟ 107, ಕಾಸರಗೋಡು ಜಿಲ್ಲೆಯಲ್ಲಿ 103, ಕೋಟ್ಟಾಯಂ 86, ತೃಶೂರು 85, ಕಣ್ಣೂರು 74, ಪಾಲಕ್ಕಾಡು 42, ವಯನಾಡು 25, ಇಡುಕ್ಕಿ 15 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss