Saturday, July 2, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ 174 ಮಂದಿಗೆ ಕೊರೋನಾ ಸೋಂಕು: 81 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 174 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 154 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 81 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಬುಧವಾರ ಒಟ್ಟು ಬರೋಬ್ಬರಿ 2333 ಮಂದಿಗೆ ಕೋವಿಡ್ ತಗಲಿದೆ. ಇದರಲ್ಲಿ 2151 ಜನರು
ಸಂಪರ್ಕದಿಂದ ರೋಗ ಬಾಧಿತರಾದರು. 1217 ಮಂದಿ ರೋಗಮುಕ್ತರಾದರು. ಈ ಮಧ್ಯೆ ರಾಜ್ಯದಲ್ಲಿ ಬುಧವಾರ ಒಟ್ಟು 7 ಮಂದಿ ಕೋವಿಡ್ ಬಾಧಿಸಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 540, ಮಲಪ್ಪುರಂ 322, ಆಲಪ್ಪುಳ 253, ಎರ್ನಾಕುಳಂ 230, ಕೋಟ್ಟಾಯಂ 203, ಕಾಸರಗೋಡು 174, ಕಣ್ಣೂರು 126, ತೃಶೂರು 97, ಪತ್ತನಂತ್ತಿಟ್ಟ 87, ಕಲ್ಲಿಕೋಟೆ 78, ಕೊಲ್ಲಂ 77, ಪಾಲಕ್ಕಾಡು 65, ಇಡುಕ್ಕಿ 64 ಹಾಗೂ ವಯನಾಡು ಜಿಲ್ಲೆಯಲ್ಲಿ 17 ಜನರಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss