Monday, July 4, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ 207 ಮಂದಿಗೆ ಕೊರೋನಾ: 165 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 207 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದರಲ್ಲಿ 187 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 165 ಮಂದಿಗೆ ರೋಗಮುಕ್ತಿಯಾಗಿದೆ. ಇದೇ ವೇಳೆ ಕೇರಳದಲ್ಲಿ 5042 ಜನರಿಗೆ ಕೋವಿಡ್ ತಗಲಿದೆ. ಈ ಪೈಕಿ 4338 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರಾಜ್ಯದಲ್ಲಿ 4640 ಜನರು ಗುಣಮುಖರಾದಾರು. ಎರ್ನಾಕುಳಂ ಜಿಲ್ಲೆಯಲ್ಲಿ 705, ತಿರುವನಂತಪುರ 700, ಕಲ್ಲಿಕೋಟೆ 641, ಮಲಪ್ಪುರಂ 606, ಕೊಲ್ಲಂ 458, ತೃಶೂರು 425, ಕೋಟ್ಟಾಯಂ 354, ಕಣ್ಣೂರು 339, ಪಾಲಕ್ಕಾಡು 281, ಕಾಸರಗೋಡು ಜಿಲ್ಲೆಯಲ್ಲಿ 207, ಆಲಪ್ಪುಳ 199, ಇಡುಕ್ಕಿ 71, ವಯನಾಡು 31, ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 25 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ಬಾಧಿಸಿ ಕೇರಳದಲ್ಲಿ ಸೋಮವಾರ 23 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss