Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ 99 ಮಂದಿಗೆ ಕೋವಿಡ್ ಪಾಸಿಟಿವ್: 95 ಮಂದಿ ರೋಗಮುಕ್ತ

ಕಾಸರಗೋಡು: ಕೇರಳದಲ್ಲಿ ಮಂಗಳವಾರ 2375 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 2142 ಜನರಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ. ಅಲ್ಲದೆ 1456 ಮಂದಿ ಗುಣಮುಖರಾದರು. ರಾಜ್ಯದಲ್ಲಿ ಕೊರೋನಾ ತಗಲಿ ಮಂಗಳವಾರ ಒಟ್ಟು 10 ಮಂದಿ ಸಾವಿಗೀಡಾದರು. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ 99 ಮಂದಿಗೆ ಕೋವಿಡ್ ದೃಢೀಕರಿಸಲಾಗಿದೆ. ಇದರಲ್ಲಿ 98 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಜಿಲ್ಲೆಯಲ್ಲಿ 95 ಮಂದಿ ರೋಗಮುಕ್ತರಾದರು. ಮಲಪ್ಪುರಂ ಜಿಲ್ಲೆಯಲ್ಲಿ 454, ತಿರುವನಂತಪುರ 391, ಕಲ್ಲಿಕೋಟೆ 260, ತೃಶೂರು 227, ಆಲಪ್ಪುಳ 170, ಎರ್ನಾಕುಳಂ 163, ಪಾಲಕ್ಕಾಡು 152, ಕಣ್ಣೂರು 150, ಕಾಸರಗೋಡು ಜಿಲ್ಲೆಯಲ್ಲಿ 99, ಪತ್ತನಂತ್ತಿಟ್ಟ 93, ಕೊಲ್ಲಂ 87, ಕೋಟ್ಟಾಯಂ 86, ವಯನಾಡು 37 ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 6 ಮಂದಿಗೆ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss