Wednesday, August 10, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ KSRTC ಮತ್ತು ಖಾಸಗಿ ಬಸ್ ಸಂಚಾರ ನಿರಾತಂಕ ಮುಂದುವರಿಕೆ

ಕಾಸರಗೋಡು: ದೀರ್ಘ ಕಾಲದ ನಂತರ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್‍ಗಳ ಸಂಚಾರ ಶುಕ್ರವಾರವೂ ನಿರಾತಂಕವಾಗಿ ಮುಂದುವರಿದಿದೆ.

ಅದರಂತೆ ಗುರುವಾರ 24 ಕೆಎಸ್ ಆರ್ ಟಿಸಿ ಬಸ್‍ಗಳು ವಿವಿಧ ರೂಟ್‍ಗಳಲ್ಲಿ ಸಂಚಾರ ನಡೆಸಿದವು. ಕೆಲವೊಂದು ಖಾಸಗಿ ಬಸ್‍ಗಳೂ ರಸ್ತೆಗಿಳಿದಿದ್ದವು.  ಕಾಸರಗೋಡಿನಿಂದ ಮಂಗಳೂರು, ಪುತ್ತೂರು, ಸುಳ್ಯ ರೂಟ್ ಗಳಲ್ಲಿ ತೆರಳುವ ಕೆಎಸ್ ಆರ್ ಟಿಸಿ ಬಸ್‍ಗಳು ಅನುಕ್ರಮವಾಗಿ ಮಂಜೇಶ್ವರ, ಪೆರ್ಲ, ಮುಳ್ಳೇರಿಯ ವರೆಗೆ ಮಾತ್ರ ಸಂಚಾರ ನಡೆಸುತ್ತಿವೆ.

ಕಾಸರಗೋಡು ಡಿಪ್ಪೋದಿಂದ ಮಂಜೇಶ್ವರಕ್ಕೆ 7, ಪೆರ್ಲಕ್ಕೆ 3, ಮುಳ್ಳೇರಿಯ 4, ಕಾಞಂಗಾಡು 6, ಚೆರ್ವತ್ತೂರು 3 ಹಾಗೂ ಪೊಯಿನಾಚಿಗೆ ಒಂದು ಬಸ್ ಗುರುವಾರ ಸಂಚಾರ ನಡೆಸಿವೆ. ಶುಕ್ರವಾರವೂ ಇದೇ ಪ್ರಕಾರದಲ್ಲಿ ಬಸ್ ಸಂಚಾರ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಸಂಚಾರ ಆರಂಭಿಸುವುದಾಗಿ ಕೆಎಸ್ ಆರ್ ಟಿಸಿ ಡಿಪ್ಪೋ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಸ್ಕ್ ಧರಿಸಿ, ಸಾನಿಟೈಸರ್ ಬಳಸುವವರಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರಿಗೆ ಸ್ಯಾನಿಟೈಸರ್ ವಿತರಿಸಿ ಪ್ರಯಾಣದ ವ್ಯವಸ್ಥೆ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಪಾಲನೆಯ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಆಸನಗಳಲ್ಲಿ ನಿಗದಿತ ಅಂತರದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತಿದೆ.

ಆದರೆ ಬಸ್ ಗಳಲ್ಲಿ ಪ್ರಯಾಣಿಕರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೊರೋನಾಕ್ಕೆ ಹೆದರಿದ ಜನರು ಬಸ್ ಗಳಲ್ಲಿ ಪ್ರಯಾಣಿಸಲು ಇದೀಗಲೂ ಭಯ ಪಡುತ್ತಿರುವುದು ಕಂಡು ಬರುತ್ತಿದೆ. ಆದರೆ ದಿನ ಕಳೆದಂತೆ ಬಸ್ ಗಳಲ್ಲಿ ಇನ್ನಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss