Monday, August 15, 2022

Latest Posts

ಕಾಸರಗೋಡು ಜಿಲ್ಲೆಯ ಪ್ರಮುಖ ಅಂತಾರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣಿಸಲು ಪಾಸ್ ಅನುಮತಿ ನೀಡಬೇಕು: ಕೆ.ಶ್ರೀಕಾಂತ್

ಕಾಸರಗೋಡು: ಪ್ರಮುಖ ಅಂತಾರಾಜ್ಯ ಹೆದ್ದಾರಿಗಳಲ್ಲಿ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಮತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ.ಕೆ.ಶ್ರೀಕಾಂತ್ ಮಾಧ್ಯಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕೇರಳ – ಕರ್ನಾಟಕ ಎರಡೂ ರಾಜ್ಯಗಳಲ್ಲಿ ಪ್ರಯಾಣಿಕರಿಗೆ ಉದ್ಯೋಗ, ಶಿಕ್ಷಣ ಮತ್ತು ಚಿಕಿತ್ಸೆಗೆ ತೆರಳಲು ಪ್ರವೇಶ ನೀಡಲು ಅಧಿಕಾರಿಗಳು ಸಿದ್ಧರಾಗಬೇಕು. ತಲಪ್ಪಾಡಿ ಮೂಲಕ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ, ಜಿಲ್ಲೆಯಲ್ಲಿ ಹಲವಾರು ಅಂತಾರಾಜ್ಯ ಹೆದ್ದಾರಿಗಳಿವೆ. ಎರಡೂ ರಾಜ್ಯಗಳಲ್ಲಿ ಸಾವಿರಾರು ಜನರು ಈ ರಸ್ತೆಗಳನ್ನು ಬಳಸುತ್ತಿದ್ದಾರೆ. ಉದ್ಯೋಗ ಅಗತ್ಯ ಒಳಗೊಂಡಂತೆ ಈ ಮಾರ್ಗಗಳಲ್ಲಿ ಪ್ರಯಾಣ ಪರವಾನಗಿಗಳ ಕೊರತೆಯಿಂದಾಗಿ ಅನೇಕ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದವರು ವಿವರಿಸಿದರು.

ಕಾಸರಗೋಡಿನಿಂದ ಕರ್ನಾಟಕದ ಹಲವಾರು ಪ್ರಮುಖ ಕೇಂದ್ರಗಳಿಗೆ ತೆರಳುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ರಸ್ತೆಗಳು ಮುಚ್ಚಿರುವುದರಿಂದ ಎಣ್ಮಕಜೆ ಮತ್ತು ದೇಲಂಪಾಡಿ ಗಡಿ ಗ್ರಾಮ ಪಂಚಾಯತ್ ಗಳು ಸಹಿತ ಜಿಲ್ಲೆಯ ಕೆಲವು ಗ್ರಾಮಗಳು ಪ್ರತ್ಯೇಕವಾಗಿ ಉಳಿದು ಅತಂತ್ರತೆಗೊಳಗಾಗಿವೆ ಎಂದು ಕೆ.ಶ್ರೀಕಾಂತ್ ಹೇಳಿದ್ದಾರೆ.

ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರಿಗೆ ಹೋಗುವವರಿಗೆ ವಿಶೇಷ ಅನುಮತಿ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದರು.

ಕರ್ನಾಟಕದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತೆರಳಲು ಅನುಮತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಉಭಯ ರಾಜ್ಯ ಸರಕಾರಗಳು ಹೊರಡಿಸಿದ ಕೆಲವು ಪ್ರಸ್ತಾಪಗಳಿಂದ ಉಭಯ ರಾಜ್ಯಗಳು ಮಾಡಿಕೊಂಡ ಒಪ್ಪಂದ ಇದೀಗ ಅಡ್ಡಿಯಾಗಿವೆ. ಇದನ್ನು ನಿವಾರಿಸಲು ಕೇರಳ ಸರಕಾರ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಜಿಲ್ಲೆಯ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳ ಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಕೇರಳ ಕಂದಾಯ ಖಾತೆ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ಶ್ರಮಿಸಬೇಕು. ಆದರೆ ಉಭಯ ರಾಜ್ಯಗಳ ಗಡಿ ವಿಷಯದಲ್ಲಿ ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಇನ್ನೂ ಅಗತ್ಯದ ಕ್ರಮ ಕೈಗೊಂಡಿಲ್ಲ ಎಂದು ಕೆ.ಶ್ರೀಕಾಂತ್ ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss