ಹೊಸ ದಿಗಂತ ವರದಿ, ಕಾಸರಗೋಡು:
ಜಿಲ್ಲೆಯ ಮುಳಿಯಾರು ಮತ್ತು ಪೆರಿಯ ಕಮ್ಯೂನಿಟಿ ಹೆಲ್ತ್ ಸೆಂಟರ್ಗಳಲ್ಲಿ ಡಯಾಲಿಸೀಸ್ ಕೇಂದ್ರಗಳನ್ನು ಆರಂಭಿಸಲು ಉದುಮ ಶಾಸಕ ಕೆ.ಕುಂಞರಾಮನ್ ಅವರ ನಿಧಿಯಿಂದ ಒಂದು ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಎರಡು ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸೀಸ್ ಸೆಂಟರ್ಗಳನ್ನು ಆರಂಭಿಸುವುದರೊಂದಿಗೆ ಜನರಿಗೆ ಹೆಚ್ಚು ಅನುಕೂಲತೆ ದೊರೆಯಲಿದೆ.
ಡಯಲಿಸೀಸ್ ಕೇಂದ್ರಗಳಿಗೆ ಒಂದೂಕಾಲು ಕೋಟಿ ರೂಪಾಯಿ ವೆಚ್ಚ ತಗಲಲಿದೆ. ಇದರಲ್ಲಿ ಒಂದು ಕೋಟಿ ರೂ. ಶಾಸಕರ ನಿಧಿಯಿಂದಲೂ, 25 ಲಕ್ಷ ರೂ. ರಾಜ್ಯ ಸರಕಾರದ ನಿಧಿಯಿಂದಲೂ ಲಭಿಸಲಿದೆ. ಅದರಂತೆ ಪೆರಿಯ ಕಮ್ಯೂನಿಟಿ ಹೆಲ್ತ್ ಸೆಂಟರ್ನಲ್ಲಿ ಡಯಾಲಿಸೀಸ್ ಕೇಂದ್ರ ಸ್ಥಾಪನೆಯ ಸಿದ್ಧತೆಗಳು ಆರಂಭಗೊಂಡಿವೆ. ಇಲ್ಲಿ ಕೆಲವೇ ದಿನಗಳೊಳಗೆ ಡಯಾಲಿಸೀಸ್ ಕೇಂದ್ರ ಚಟುವಟಿಕೆ ಆರಂಭಿಸಲಿದೆ. ಇದೇ ವೇಳೆ ಮುಳಿಯಾರು ಆರೋಗ್ಯ ಕೇಂದ್ರದಲ್ಲಿ ಡಯಾಲಿಸೀಸ್ ಕೇಂದ್ರಕ್ಕಿರುವ ಅಗತ್ಯದ ವಿದ್ಯುತ್ ಸಂಪರ್ಕ ಒದಗಿಸುವ ಕೆಲಸ ನಡೆಯುತ್ತಿದೆ.