ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈ ರನ್

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ವಿತರಣೆಯ ಕೊನೆಯ ಹಂತದ ಸಿದ್ಧತೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಶುಕ್ರವಾರ ಡ್ರೈ ರನ್ ಕಾರ್ಯಕ್ರಮ ನಡೆಯಿತು. ಕೊರೋನಾ ಪ್ರತಿರೋಧ ಚುಚ್ಚುಮದ್ದು ನೀಡಿಕೆ ಹೊರತುಪಡಿಸಿ ವ್ಯಾಕ್ಸಿನೇಷನ್‌ನ ಎಲ್ಲ ಕ್ರಮಗಳನ್ನೂ ಯೋಜನೆಯ ಅಂಗವಾಗಿ ಜಾರಿಗೊಳಿಸಲಾಯಿತು. ಕಾಞಂಗಾಡಿನ ಕಾಸರಗೋಡು ಜಿಲ್ಲಾ ಆಸ್ಪತ್ರೆ , ಚಿತ್ತಾರಿಕಲ್ಲ್ ಕುಟುಂಬ ಆರೋಗ್ಯ ಕೇಂದ್ರ , ಕಿಮ್ಸ್ ಆಸ್ಪತ್ರೆ ಕಾಸರಗೋಡು ಈ ಸಂಸ್ಥೆಗಳಲ್ಲಿ ಪೂರ್ಣರೂಪದಲ್ಲಿ ಕೋವಿಡ್ ಸಂಹಿತೆ ಪಾಲಿಸಿ ಡ್ರೈ ರನ್ ನಡೆಸಲಾಯಿತು. ಈ ಮೊದಲೇ ನಿಗದಿಪಡಿಸಲಾದ ತಲಾ 25 ಮಂದಿಗೆ ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಈ ಮೂರೂ ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲಾಯಿತು. ಡ್ರೈ ರನ್‌ನಲ್ಲಿ ಭಾಗವಹಿಸುವ ಮಂದಿಯ ಮಾಹಿತಿಗಳನ್ನು ಸಂಬಂಧಪಟ್ಟ ಕೋವಿಡ್ ಎಂಬ ಪೋರ್ಟಲ್‌ನಲ್ಲಿ ಅಳವಡಿಸಲಾಗಿತ್ತು. ಡ್ರೈ ರನ್ ಕೇಂದ್ರಗಳ ವ್ಯಾಕ್ಸಿನೇಷನ್ ಅಧಿಕಾರಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್ ಪ್ರವೇಶಿಸಿದರೆ ಆಯಾ ಕೇಂದ್ರಗಳಲ್ಲಿ ವಾಕ್ಸಿನೇಷನ್ ಪಡೆದವರ ಮಾಹಿತಿ ಲಭಿಸುವುದು. ವ್ಯಾಕ್ಸಿನೇಷನ್ ಪಡೆದವರನ್ನು ಅರ್ಧ ಗಂಟೆ ಕಾಲ ನಿಗಾದಲ್ಲಿರಿಸಿ ನಂತರ ತೆರಳಲು ಅನುಮತಿ ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss