Monday, August 8, 2022

Latest Posts

ಕಾಸರಗೋಡು ಜಿಲ್ಲೆಯ ಮೂವರು ಸೇರಿ ಕೇರಳದಲ್ಲಿ ಗುರುವಾರ 97 ಮಂದಿಗೆ ಕೊರೋನಾ ವೈರಸ್ ಅಟ್ಯಾಕ್

ಕಾಸರಗೋಡು:  ಜಿಲ್ಲೆಯಲ್ಲಿ ಗುರುವಾರ ಮೂವರಿಗೆ ಕೋವಿಡ್ ಪಾಸಿಟಿವ್ ಆಗಿದೆ. 11 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತರಾದವರಲ್ಲಿ ಮೂವರು ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಶಾರ್ಜಾದಿಂದ ಆಗಮಿಸಿದ್ದ ಉದುಮ ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ , ಕುವೈತ್‍ನಿಂದ ಬಂದಿದ್ದ ಚೆಂಗಳ ಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ , ಪಡನ್ನ ಪಂಚಾಯತ್ ನಿವಾಸಿ 36 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.
ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಆಗಮಿಸಿದ್ದ, ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳಾದ 30, 38 ವರ್ಷದ ವ್ಯಕ್ತಿಗಳು, ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 23 ವರ್ಷದ ವ್ಯಕ್ತಿ , ಮಂಗಲ್ಪಾಡಿ ಪಂಚಾಯತ್ ನಿವಾಸಿ 54 ವರ್ಷದ ವ್ಯಕ್ತಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 45 ವರ್ಷದ ವ್ಯಕ್ತಿ , ಪೈವಳಿಕೆ ಪಂಚಾಯತ್ ವ್ಯಾಪ್ತಿಯ 39 ವರ್ಷದ ನಿವಾಸಿ ಮತ್ತು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ , ಶಾರ್ಜಾದಿಂದ ಬಂದಿದ್ದ ಉದುಮ ಪಂಚಾಯತ್ ನಿವಾಸಿಯಾದ 48 ವರ್ಷದ ವ್ಯಕ್ತಿ, ಕುವೈತ್‍ನಿಂದ ಆಗಮಿಸಿದ್ದ ಪುಲ್ಲೂರು – ಪೆರಿಯ ನಿವಾಸಿ 24 ವರ್ಷದ ವ್ಯಕ್ತಿ , ಮಹಾರಾಷ್ಟ್ರದಿಂದ ಬಂದಿದ್ದ ಕುಂಬ್ಡಾಜೆ ಪಂಚಾಯತ್ ನಿವಾಸಿ 41, 34 ವರ್ಷದ ವ್ಯಕ್ತಿಗಳು ಹಾಗೂ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಖತ್ತರ್‍ನಿಂದ ಆಗಮಿಸಿದ್ದ
ಮಡಿಕೈ ಗ್ರಾಮ ಪಂಚಾಯತ್ ನಿವಾಸಿ 38 ವರ್ಷದ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 3682 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3351 ಮಂದಿ ಮನೆಗಳಲ್ಲಿ , 331 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 228 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 362 ಮಂದಿಯ ಫಲಿತಾಂಶ ಲಭಿಸಿಲ್ಲ. 228 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 97 ಮಂದಿಗೆ ಕೋವಿಡ್ ಸೋಂಕು
ಕೇರಳ ರಾಜ್ಯದಲ್ಲಿ ಗುರುವಾರ 97 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 89 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 65 ಮಂದಿ ವಿದೇಶದಿಂದ ಬಂದವರು. 29 ಮಂದಿ ಇತರ ರಾಜ್ಯಗಳಿಂದ ಬಂದವರು. ಮೂವರಿಗೆ ಸಂಪರ್ಕದಿಂದ ರೋಗ ತಗುಲಿದೆ.
ಇದೇ ವೇಳೆ ತಿರುವನಂತಪುರ -5, ಕೊಲ್ಲಂ-13, ಪತ್ತನಂತಿಟ್ಟ-11, ಆಲಪ್ಪುಳ-9, ಕೋಟ್ಟಯಂ-11, ಇಡುಕ್ಕಿ-6, ಎರ್ನಾಕುಳಂ-6, ತೃಶ್ಶೂರು-6, ಪಾಲ್ಘಾಟ್-14, ಮಲಪ್ಪುರಂ-4, ಕಲ್ಲಿಕೋಟೆ-5, ಕಣ್ಣೂರು-4, ಕಾಸರಗೋಡು-3 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-9, ಕೊಲ್ಲಂ-8, ಪತ್ತನಂತಿಟ್ಟ-3, ಆಲಪ್ಪುಳ-10, ಕೋಟ್ಟಯಂ-2, ಎರ್ನಾಕುಳಂ-4, ತೃಶ್ಶೂರು-22, ಪಾಲ್ಘಾಟ್- 11, ಮಲಪ್ಪುರಂ-2, ಕಲ್ಲಿಕೋಟೆ-1, ವಯನಾಡು-2, ಕಣ್ಣೂರು-4, ಕಾಸರಗೋಡು-11 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 215 ಮಂದಿ ವಿರುದ್ಧ ಕೇಸು
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 215 ಮಂದಿಯ ವಿರುದ್ಧ ಕೇಸುಗಳನ್ನು ದಾಖಲಿಸಲಾಗಿದೆ. ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ 7091 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ: 11 ಕೇಸುಗಳು
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 11 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂಧಿಸಲಾಗಿದ್ದು , 8 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ 5 ಕೇಸುಗಳು, ಕಾಸರಗೋಡು 1, ಮೇಲ್ಪರಂಬ 1, ಹೊಸದುರ್ಗ 1, ನೀಲೇಶ್ವರ 1, ವೆಳ್ಳರಿಕುಂಡ್ 1, ಚಂದೇರ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ 2650 ಕೇಸುಗಳು ದಾಖಲಾಗಿವೆ. 3342 ಮಂದಿಯನ್ನು ಬಂಧಿಸಲಾಗಿದೆ. 1149 ವಾಹನಗಳನ್ನು ವಶಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss