Tuesday, June 28, 2022

Latest Posts

ಕಾಸರಗೋಡು| ಜಿಲ್ಲೆಯ ವಿವಿಧೆಡೆ ಆತಂಕ ಹುಟ್ಟಿಸಿದೆ ಡೆಂಗ್ಯೂ ಜ್ವರ ಹೆಚ್ಚಳ ಪ್ರಕರಣ

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಡೆಂಗ್ಯೂ ಜ್ವರ ತಲೆದೋರಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.
ಇದರ ಅಂಗವಾಗಿ ಶಿಬಿರಗಳು, ಡೆಂಗ್ಯೂ ಹರತಾಳ, ಶುಚೀಕರಣ ಸಹಿತ ವಿವಿಧ ಚಟುವಟಿಕೆಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆಯು ನಡೆಸುತ್ತಿದೆ. ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ವತಿಯಿಂದ ಜಿಲ್ಲೆಯ ವಿವಿಧೆಡೆ ಸೊಳ್ಳೆ ನಾಶ, ಸಂತಾನೋತ್ಪತ್ತಿ ಕೇಂದ್ರಗಳ ನಾಶ ಇತ್ಯಾದಿ ನಡೆಸಲಾಗಿದೆ. ಕಾಸರಗೋಡು, ಕಾಞಂಗಾಡು, ನೀಲೇಶ್ವರ ನಗರಸಭೆ ಪ್ರದೇಶಗಳಲ್ಲಿ ಗಂಭೀರ ಸಮಸ್ಯೆಗಳಿವೆ ಎಂದು ಯೂನಿಟ್ ಮುನ್ನೆಚ್ಚರಿಕೆ ನೀಡಿದೆ. ಮನೆಗಳ ಆಸುಪಾಸಿನಲ್ಲಿ , ತೋಟಗಳಲ್ಲಿ ಸಹಿತ ವಿವಿಧೆಡೆ ನೀರು ಕಟ್ಟಿನಿಲ್ಲುವ ಸಾಧ್ಯತೆಗಳಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಆ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss