ಕಾಸರಗೋಡು: ಜಿಲ್ಲೆಯಲ್ಲಿ ಕಾಞಂಗಾಡು, ಕಾಸರಗೋಡು ನಗರಸಭೆ, ಕುಂಬಳೆ, ಮಧೂರು, ಚೆಮ್ನಾ ಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು ಗ್ರಾಮ ಪಂಚಾಯತ್ ಗಳನ್ನು ಈಗಾಗಲೇ ಹಾಟ್ಸ್ಪೋಟ್ ವಲಯಗಳಾಗಿ ಗುರುತಿಸಲಾಗಿದ್ದು, ಅಜಾನೂರು ಗ್ರಾಮ ಪಂಚಾಯತ್ ನ್ನು ಕೂಡಾ ಈ ಪಟ್ಟಿಯಲ್ಲಿ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿ ಕೋವಿಡ್- 19 ವೈರಸ್ ಪೀಡಿತರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬಾಟಲಿಗಳ ತೆರವಿಗೆ ಆದೇಶ
ತಮ್ಮ ಅಂಗಡಿಗಳ ಮುಂಭಾಗದಲ್ಲಿ ಇರಿಸಲಾಗಿರುವ ಸೋಡಾ ಸಹಿತ ಪಾನೀಯಗಳ ಬಾಟಲಿಗಳನ್ನು ತಕ್ಷಣ ತೆರವುಗೊಳಿಸುವಂತೆ ಇವುಗಳ ನಿರ್ಮಾಣಕಾರರಿಗೆ ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಅಂಗಡಿಗಳ ಹೊರಗಿರಿಸಿರುವ ಬಾಟಲಿಗಳಲ್ಲಿ ನೀರು ದಾಸ್ತಾನುಗೊಂಡು ಸೊಳ್ಳೆ ಸಂತಾನೋತ್ಪತ್ತಿ ನಡೆದು ಸಾಂಕ್ರಾಮಿಕ ರೋಗಗಳ ಹೆಚ್ಚಳ ಭೀತಿಯಿರುವುದರಿಂದ ಈ ಕ್ರಮ ನಡೆಸುವಂತೆ ತಿಳಿಸಲಾಗಿದೆ. ಜಿಲ್ಲೆಯ ಹಾಟ್ ಸ್ಪಾಟ್ ಗಳ ಸಹಿತ ಎಲ್ಲ ಪ್ರದೇಶಗಳಲ್ಲಿ ಈ ಕ್ರಮ ನಡೆಸುವಂತೆ ಅವರು ಹೇಳಿದರು. ಅಂಗಡಿಗಳಲ್ಲಿ ಈ ಪಾನೀಯಗಳ ಮಾರಾಟ ನಡೆಸಕೂಡದು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.