ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 7 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಡಿ.ಎಂ.ಒ. ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
39 ವರ್ಷದ ಕಾರಡ್ಕ ಪಂಚಾಯತ್ ನಿವಾಸಿ, 47 ವರ್ಷದ ಅಜಾನೂರು ಪಂಚಾಯತ್ ನಿವಾಸಿ, 54 ವರ್ಷದ ಪಳ್ಳಿಕೆರೆ ನಿವಾಸಿ, 30 ವರ್ಷದ ಚೆಂಗಳ ಪಂಚಾಯತ್ ನಿವಾಸಿ, 38 ವರ್ಷದ ಮಂಗಲ್ಪಾಡಿ ನಿವಾಸಿ, 26 ವರ್ಷದ ವರ್ಕಾಡಿ ನಿವಾಸಿಗೆ ರೋಗ ಬಾಧಿಸಿದೆ. ಅಲ್ಲದೆ ಮಹಾರಾಷ್ಟ್ರದಿಂದ ಬಂದ 58 ವರ್ಷದ ಮಂಗಲ್ಪಾಡಿ ನಿವಾಸಿಗೆ ರೋಗ ತಗುಲಿದೆ.
ಇದೇ ವೇಳೆ ಕಾಸರಗೋಡು ಮೆಡಿಕಲ್ ಕಾಲೇಜು ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕಾಞಂಗಾಡು ನಗರಸಭಾ ನಿವಾಸಿ, ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 51 ವರ್ಷದ ಮಂಗಲ್ಪಾಡಿ ನಿವಾಸಿ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 219 ಮಂದಿ ವಿರುದ್ಧ ಕೇಸು ದಾಖಲು
ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 219 ಮಂದಿ ವಿರುದ್ಧ ಶನಿವಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 7551 ಕೇಸುಗಳನ್ನು ದಾಖಲಿಸಲಾಗಿದೆ.
ಕೇರಳದಲ್ಲಿ 127 ಮಂದಿಗೆ ಕೋವಿಡ್ ಸೋಂಕು
ಕೇರಳದಲ್ಲಿ ಶನಿವಾರ 127 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮಧ್ಯೆ 57 ಮಂದಿ ರೋಗ ಮುಕ್ತರಾಗಿದ್ದಾರೆ. ಮಲಪ್ಪುರಂ-5, ಕಲ್ಲಿಕೋಟೆ-12, ತಿರುವನಂತಪುರಂ-5, ಕಾಸರಗೋಡು-7, ಪತ್ತನಂತಿಟ್ಟ-17, ಇಡುಕ್ಕಿ-1, ಎರ್ನಾಕುಳಂ-3, ಕೋಟ್ಟಯಂ-11, ಕೊಲ್ಲಂ-24, ತೃಶ್ಶೂರು-6, ಕಣ್ಣೂರು-4, ಆಲಪ್ಪುಳ-4, ಪಾಲ್ಘಾಟ್-23, ವಯನಾಡು-5 ಎಂಬಂತೆ ರೋಗ ಬಾಧಿಸಿದೆ.
ಮಲಪ್ಪುರಂ-1, ತಿರುವನಂತಪುರ-11, ಕೊಲ್ಲಂ-2, ಆಲಪ್ಪುಳ-12, ಪತ್ತನಂತಿಟ್ಟ-12, ಎರ್ನಾಕುಳಂ-1, ಪಾಲ್ಘಾಟ್-10, ವಯನಾಡು-2, ಕಣ್ಣೂರು-2, ಕಾಸರಗೋಡು-2 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 3039 ಮಂದಿಗೆ ರೋಗ ಬಾಧಿಸಿದೆ. 1450 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಶಂಕಿತ 258 ಮಂದಿಯನ್ನು ಕೇರಳದ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.